ಇತ್ತೀಚೆಗೆ ದೇವತೆಗಳನ್ನು ವಿವಿಧ ರೀತಿಯಲ್ಲಿ ವಿಡಂಬನೆ ಮಾಡಲಾಗುತ್ತಿದೆ. ಉದಾ. ಹಿಂದೂದ್ವೇಷಿ ಚಿತ್ರಕಾರ ಮ.ಫಿ.ಹುಸೇನನು ಹಿಂದೂಗಳ ದೇವತೆಗಳನ್ನು ನಗ್ನವಾಗಿ ಚಿತ್ರಿಸಿ ಅವುಗಳನ್ನು ಸಾರ್ವಜನಿಕವಾಗಿ ಮಾರಾಟಕ್ಕೆ ಇಟ್ಟಿದ್ದನು. ವ್ಯಾಖ್ಯಾನಗಳು, ಪುಸ್ತಕಗಳು ಮುಂತಾದ ಮಾಧ್ಯಮಗಳಿಂದ ದೇವತೆಗಳನ್ನು ಟೀಕಿಸಲಾಗುತ್ತಿದೆ. ವ್ಯಾಪಾರದ ಉದ್ದೇಶದಿಂದ ಜಾಹೀರಾತುಗಳಿಗಾಗಿ ದೇವತೆಗಳನ್ನು ‘ಮಾಡೆಲ್’ ಎಂದು ಉಪಯೋಗಿ ಸಲಾಗುತ್ತಿದೆ. ದೇವತೆಗಳನ್ನು ಈ ರೀತಿ ವಿಡಂಬನೆ ಮಾಡಿದರೆ ಅದು ಶ್ರದ್ಧೆಯ ಮೇಲೆ ಪರಿಣಾಮ ಬೀರುತ್ತದೆ. ಆದುದರಿಂದ ಇದು ಧರ್ಮಹಾನಿಯಾಗಿದೆ. ಧರ್ಮಹಾನಿಯನ್ನು ತಡೆಗಟ್ಟುವುದು ಕಾಲಾನುಸಾರ ಅವಶ್ಯಕವಾದಂತಹ ದೇವತೆಯ ಸಮಷ್ಟಿ ಸ್ತರದಲ್ಲಿನ ಉಪಾಸನೆಯೇ (ಸಾಧನೆ) ಆಗಿದೆ.

No comments:
Post a Comment