ಈ ವಾರದಿಂದ ಹೊಸ ಅಂಕಣ
ಧರ್ಮಸತ್ಸಂಗ
ಸನಾತನ ಹಿಂದೂ ಧರ್ಮದಲ್ಲಿ, ಪ್ರತಿಯೊಂದು ಸಾಮಾನ್ಯದಿಂದ ಅತಿಸಾಮಾನ್ಯ ಕ್ರಿಯೆಯೂ ಧರ್ಮ-ಅಧರ್ಮದ ಸಂಕಲ್ಪನೆ ಯೊಂದಿಗೆ ಜೋಡಿಸಲ್ಪಟ್ಟಿದೆ. ವಿವಿಧ ಧಾರ್ಮಿಕ ಕೃತಿಗಳಾಗುವುದು ಈ ಧರ್ಮದ ಒಂದು ವಿಶೇಷತೆ. ಇದರ ಬುನಾದಿಯು ಆಧ್ಯಾತ್ಮಿಕತೆಯ ಮೇಲೆಯೇ ನಿಂತಿದೆ. ನಮ್ಮ ತ್ರಿಕಾಲದರ್ಶಿ ಋಷಿ-ಮುನಿಗಳು ಮನುಷ್ಯನ ವೈಯಕ್ತಿಕ ಮತ್ತು ಸಾಮಾಜಿಕ ಜೀವನದ ವಾಸ್ತವಿಕ ಸುಖ, ಶಾಂತಿ ಮತ್ತು ಆನಂದದ ತತ್ತ್ವವನ್ನು ತಮ್ಮ ದಿವ್ಯದೃಷ್ಟಿಯಿಂದ ನೋಡಿದ್ದರು.
ಆದುದರಿಂದ ಅವರು ಮನುಷ್ಯನ ಪ್ರತಿಯೊಂದು ಕ್ರಿಯಾ-ಕಲಾಪ, ಆಚಾರ-ವ್ಯವಹಾರ ಮತ್ತು ಪ್ರತಿಯೊಂದು ಕೃತಿಯನ್ನು ಆಧ್ಯಾತ್ಮಿಕ ದೃಷ್ಟಿಕೋನದಿಂದ ಕೆಲವು ನಿಯಮಗಳ ಮೂಲಕ ನಿಯಂತ್ರಿಸಿದರು. ಬೆಳಗ್ಗೆ ಏಳುವುದು, ಸ್ನಾನ, ಊಟ, ಮಲಮೂತ್ರ ವಿಸರ್ಜನೆ ಮಾಡುವುದು, ನಿದ್ರೆ ಮುಂತಾದ ಎಲ್ಲ ಶಾರೀರಿಕ, ಮಾನಸಿಕ ಮತ್ತು ಬೌದ್ಧಿಕ ಕೃತಿಗಳನ್ನು ಧರ್ಮದ ಮೂಲಕ ಈ ರೀತಿಯಲ್ಲಿ ನಿಯಂತ್ರಿಸಲಾಗಿರುವುದರಿಂದ ನಾವು ಪ್ರತಿಯೊಂದು ಕೃತಿಯನ್ನೂ ಧಾರ್ಮಿಕ ಕೃತಿ ಎಂದೇ ಸಂಬೋಧಿಸಬೇಕಾಗುವುದು. ಇವುಗಳ ಕುರಿತು ಹಿಂದೂಗಳಲ್ಲಿ ಅರಿವು ಜಾಗೃತಗೊಳಿಸಲು ಈ ಲೇಖನಮಾಲೆಯನ್ನು ಆರಂಭಿಸಲಾಗಿದೆ.
ಧರ್ಮಾಚರಣೆಯಿಂದ ವಿವಿಧ ಸ್ತರಗಳಲ್ಲಾಗುವ ಲಾಭ
೧.ನಮಗೆ ಇಹಲೋಕದಲ್ಲಿ ಆರೋಗ್ಯ, ಸುಖ-ಸಮಾಧಾನ ಮತ್ತು ದೀರ್ಘಾ ಯುಷ್ಯವು ಪ್ರಾಪ್ತವಾಗುತ್ತದೆ.
೨.ಇವೆಲ್ಲವನ್ನೂ ಸಾಧ್ಯಗೊಳಿಸುತ್ತಿ ದ್ದಂತೆಯೇ ನಮ್ಮ ಪಾರಲೌಕಿಕ ಅಭ್ಯುದಯ ಮತ್ತು ನಮ್ಮ ಆಧ್ಯಾತ್ಮಿಕ ಪ್ರಗತಿಯೂ ಆಗುತ್ತದೆ
೩.ನಮ್ಮ ಆಧ್ಯಾತ್ಮಿಕ ಉನ್ನತಿಯ ಮೂಲಕ ಪೂರ್ಣತ್ವ ಪ್ರಾಪ್ತ ಮಾಡಿಕೊಂಡು ಅರ್ಥಾತ್ ಈಶ್ವರಪ್ರಾಪ್ತಿ ಮಾಡಿಕೊಂಡರೆ ನಮ್ಮ ಮನುಷ್ಯ ಜನ್ಮವು ಸಾರ್ಥಕವಾಗುತ್ತದೆ.
ಮನುಷ್ಯ ಜೀವನದ ಇದೇ ಉದ್ದೇಶದ ಪ್ರಾಪ್ತಿಗಾಗಿ ನಮ್ಮ ಧರ್ಮಶಾಸ್ತ್ರಗಳು ಎಲ್ಲ ರೀತಿಯಲ್ಲಿ ಪ್ರಯತ್ನಿಸುತ್ತಿರುತ್ತದೆ. ಇವೇ ಕಾರಣಗಳಿಗೆ ನಮಗೆ ಸನಾತನ ಹಿಂದೂ ಧರ್ಮದ ವಿವಿಧ ಧಾರ್ಮಿಕ ಕೃತಿಗಳ ಆಧಾರವಾಗಿರುವ ಅಧ್ಯಾತ್ಮಶಾಸ್ತ್ರವನ್ನು ಅರಿತುಕೊಳ್ಳುವುದು ಅನಿವಾರ್ಯವಾಗಿದೆ. ಆದ್ದರಿಂದ, ಮೊದಲು ನಾವು ಈ ಕೃತಿಗಳ ಪರಿಣಾಮಗಳ ವಿವಿಧ ಸ್ತರಗಳನ್ನು ಅರಿತುಕೊಳ್ಳಬೇಕಾಗುವುದು.
ಯಾವುದೇ ಕೃತಿಯ ಪರಿಣಾಮಗಳ ಪ್ರಧಾನ ಸ್ತರ
ಯಾವುದೇ ಕೃತಿಯಿಂದ ಮೂರು ಸ್ತರ ಗಳಲ್ಲಿ ಪರಿಣಾಮವಾಗಬಹುದು. ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ. ಮಾನವನ ಪರಮಕಲ್ಯಾಣದ ದೃಷ್ಟಿಯಿಂದ ಆಧ್ಯಾತ್ಮಿಕ ಸ್ತರದ ಪರಿಣಾಮಗಳು, ಶಾರೀರಿಕ ಮತ್ತು ಮಾನಸಿಕ ಸ್ತರದಲ್ಲಿನ ಪರಿಣಾಮಗಳಿಗಿಂತ ಅಧಿಕ ಮಹತ್ವಪೂರ್ಣವಿರುತ್ತವೆ. ಶಾರೀರಿಕ ಸ್ತರದಲ್ಲಿ ಯಾವ ಪರಿಣಾಮವಾಗುವುದೋ ಅದು ಸ್ಥೂಲ ಸ್ತರದ ಪರಿಣಾಮವಾಗಿದೆ. ಇದರ ತುಲನೆಯಲ್ಲಿ ಮಾನಸಿಕ ಸ್ತರದ ಲ್ಲಾಗುವ ಪರಿಣಾಮವು ಸೂಕ್ಷ್ಮಸ್ತರದ್ದಾಗಿದೆ. ಆಧ್ಯಾತ್ಮಿಕ ಸ್ತರದಲ್ಲಾಗುವ ಪರಿಣಾಮವು ಇವೆರಡರ ತುಲನೆಯಲ್ಲಿ ಅಧಿಕ ಸೂಕ್ಷ್ಮ, ಅಂದರೆ ಅತಿಸೂಕ್ಷ್ಮ ಸ್ತರದ ಪರಿಣಾಮ ವಾಗಿದೆ. ಅಧ್ಯಾತ್ಮಶಾಸ್ತ್ರಕ್ಕನುಸಾರ ಸ್ಥೂಲ ಕ್ಕಿಂತಲೂ ಸೂಕ್ಷ್ಮವು ಅಧಿಕ ಪ್ರಭಾವ ಶಾಲಿಯಾಗಿದೆ.
ಧರ್ಮ ಸತ್ಸಂಗದ ಪ್ರಮುಖ ಉದ್ದೇಶಗಳು
೧.ಧಾರ್ಮಿಕ ಕೃತಿಗಳ ಯೋಗ್ಯ ಪದ್ಧತಿಗೆ ಸಂಬಂಧಿಸಿದಂತೆ ಮಾರ್ಗದರ್ಶನ ಮಾಡುವುದು
೨.ಈ ಧಾರ್ಮಿಕ ಕೃತಿಗಳ ಅಧ್ಯಾತ್ಮ ಶಾಸ್ತ್ರೀಯ ಕಾರಣವನ್ನು ಹೇಳುವುದು.
ವಿಶಿಷ್ಟ ಧಾರ್ಮಿಕ ಕೃತಿಯನ್ನು ಮಾಡುವುದರಿಂದ ಯಾವ ಲಾಭವಾಗುತ್ತದೆ ಎಂಬುದು ನಮಗೆ ತಿಳಿದಿರುವುದಿಲ್ಲ. ನಾವು ಕೇವಲ ಅನುಕರಣೆ ಮಾಡುತ್ತಿರುತ್ತೇವೆ. ನಮಗೇನಾದರೂ ಯಾವುದಾದರೂಂದು ವಿಶಿಷ್ಟ ಧಾರ್ಮಿಕ ಕೃತಿಯಿಂದಾಗುವ ಲಾಭವು ತಿಳಿದರೆ ನಾವು ಆ ಕೃತಿಯನ್ನು ಶ್ರದ್ಧಾ ಪೂರ್ವಕವಾಗಿ ಮಾಡುತ್ತೇವೆ. ಆದುದರಿಂದ ಧಾರ್ಮಿಕ ಕೃತಿಗಳಿಗೆ ಸಂಬಂಧಿಸಿದ ಅಧ್ಯಾತ್ಮ ಶಾಸ್ತ್ರವನ್ನು ಸ್ಪಷ್ಟಗೊಳಿಸುವುದು ಈ ಸತ್ಸಂಗದ ಇನ್ನೊಂದು ಪ್ರಧಾನ ಉದ್ದೇಶವಾಗಿದೆ.
ಧಾರ್ಮಿಕ ಕೃತಿಗೆ ಸಂಬಂಧಿಸಿದ ಅಧ್ಯಾತ್ಮ ಶಾಸ್ತ್ರವು ಮುಂದಿನ ಉದಾಹರಣೆಯಿಂದ ಹೆಚ್ಚು ಸ್ಪಷ್ಟವಾಗುವುದು. ಭಗವಂತನ ಪೂಜೆಯಲ್ಲಿ ನಾವು ಎಣ್ಣೆಯ ದೀಪವನ್ನು ಬೆಳಗದೇ ತುಪ್ಪದ ದೀಪ ಪ್ರಜ್ವಲನೆ ಮಾಡುತ್ತೇವೆ. ಕಾರಣವೇನು?
ಅಧ್ಯಾತ್ಮಶಾಸ್ತ್ರಕ್ಕನುಸಾರ ಎಣ್ಣೆಯ ದೀಪವು ತುಪ್ಪದ ದೀಪದ ತುಲನೆಯಲ್ಲಿ ರಜೋ ಗುಣವನ್ನು ಹೆಚ್ಚು ಪ್ರಮಾಣದಲ್ಲಿ ಪ್ರಕ್ಷೇಪಿ ಸುತ್ತದೆ. ತುಪ್ಪದ ದೀಪವು ಎಣ್ಣೆಯ ದೀಪದ ತುಲನೆಯಲ್ಲಿ ಹೆಚ್ಚು ಸತ್ತ್ವಗುಣಿಯಾಗಿದೆ.
ಸಾಮಾನ್ಯವಾಗಿ ಪೂಜಕನಿಗೆ ಸತ್ತ್ವಗುಣ ಲಭಿಸಬೇಕೆಂಬ ಅಪೇಕ್ಷೆಯು ಇರುತ್ತದೆ. ಆದುದರಿಂದ ನಾವು ಪೂಜೆಯಲ್ಲಿ ತುಪ್ಪದ ದೀಪವನ್ನು ಪ್ರಜ್ವಲಿಸುತ್ತೇವೆ. ಇದರಿಂದ ತಿಳಿಯುವುದೇನೆಂದರೆ ಯಾವ ಧಾರ್ಮಿಕ ಕೃತಿಯನ್ನು ಯಾವಾಗ ಮತ್ತು ಹೇಗೆ ಮಾಡಬೇಕು ಎಂಬ ಬಗ್ಗೆ ಶಾಸ್ತ್ರವು ವಿಶಿಷ್ಟ ಮಾರ್ಗದರ್ಶನವನ್ನು ಮಾಡುತ್ತದೆ. (ಮುಂದುವರಿಯುವುದು)
No comments:
Post a Comment