ಚತುರ್ಥಿಯಂದು ಚಂದ್ರನನ್ನು ನೋಡಬಾರದು

ಚತುರ್ಥಿಯಂದು ಚಂದ್ರನನ್ನು ನೋಡಬಾರದು; ಏಕೆಂದರೆ ಚಂದ್ರನು ಮನಸ್ಸನ್ನು ಕಾರ್ಯ ಮಾಡಲು ಉದ್ಯುಕ್ತ ಮಾಡುವವನಾಗಿದ್ದಾನೆ. ಗ್ರಹಮಾಲೆಯಲ್ಲಿ ಚಂದ್ರನು ಚಂಚಲನಾಗಿದ್ದಾನೆ, ಅಂದರೆ ಅವನ ಗಾತ್ರವು ಹೆಚ್ಚುಕಡಿಮೆ ಆಗುತ್ತಿರುತ್ತದೆ;
ಹಾಗೆಯೇ ಶರೀರದಲ್ಲಿ ಮನಸ್ಸು ಚಂಚಲವಾಗಿದೆ. ಈ ಮನಸ್ಸು ಉನ್ಮತ್ತವಾದಾಗ ತುರ್ಯಾವಸ್ಥೆ ಪ್ರಾಪ್ತವಾಗುತ್ತದೆ. (ತುರ್ಯಾವಸ್ಥೆ ಎಂದರೆ ಜಾಗೃತಿ, ಸ್ವಪ್ನ ಮತ್ತು ಸುಷುಪ್ತಿ (ಗಾಢ ನಿದ್ರೆ)ಇವುಗಳ ಮುಂದಿನ ಅವಸ್ಥೆ) ಸಂಕಷ್ಟಿಯಂದು ದಿನವಿಡೀ ಸಾಧನೆ ಮಾಡಿ ರಾತ್ರಿ ಚಂದ್ರದರ್ಶನ ಮಾಡುತ್ತಾರೆ. ಇದು, ಒಂದು ರೀತಿ ಸಾಧನೆ ಮುಗಿದಿರುವ ಹಾಗೂ ಮನಸ್ಸಿನ ಕಾರ್ಯವನ್ನು ನಿತ್ಯದಂತೆ ಪ್ರಾರಂಭಿಸುವುದರ ದರ್ಶಕವಾಗಿದೆ.

No comments:

Post a Comment