೧.ಹಿಂದೂಗಳೇ, ಭಯೋತ್ಪಾದಕರನ್ನು ಬೆಂಬಲಿಸುವ ಧರ್ಮಾಂಧರ ರಾಷ್ಟ್ರದ್ರೋಹವನ್ನು ಅರಿತುಕೊಳ್ಳಿರಿ!
ಬೆಂಗಳೂರು ಬಾಂಬ್ ಸ್ಫೋಟದ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿರುವ ಕೇರಳದ ‘ಪೀಪಲ್ಸ್ ಡೆಮೋಕ್ರೆಟಿಕ್ ಪಾರ್ಟಿ (ಪಿಡಿಪಿ) ಯ ನೇತಾರರಾದ ಅಬ್ದುಲ್ ನಾಸಿರ್ ಮದನಿಯನ್ನು ಬಂಧಿಸಲು ಹೋಗಿದ್ದ ಕರ್ನಾಟಕದ ಪೊಲೀಸರನ್ನು ಮದನಿಯ ೫೦೦ಕ್ಕಿಂತ ಹೆಚ್ಚು ಧರ್ಮಾಂಧ ಸಮರ್ಥಕರು ವಿರೋಧಿಸಿದ್ದರು.
೨.ಹಿಂದೂಗಳೇ, ಧರ್ಮಾಂಧರ ಅತ್ಯಾಚಾರಗಳ ವಿರುದ್ಧ ಸಂಘಟಿತರಾಗುವ ಬಂಗಾಲದಲ್ಲಿನ ಹಿಂದೂ ಮಹಿಳೆಯರಿಂದ ಆದರ್ಶವನ್ನು ಕಲಿಯಿರಿ!
ಕೊಲಕಾತಾದಲ್ಲಿ ‘ಹಿಂದೂ ಸಮಹಾತಿ’ ಎಂಬ ಸಂಘಟನೆಯು ನಡೆಸಿದ ಮಹಿಳೆಯರ ಸಮ್ಮೇಳನದಲ್ಲಿ ಬಂಗಾಲದ ವಿವಿಧ ಜಿಲ್ಲೆಯಿಂದ ದೊಡ್ಡ ಪ್ರಮಾಣದಲ್ಲಿ ಮಹಿಳೆಯರು ಸಹಭಾಗಿಯಾಗಿದ್ದರು. ಅವರು ಧರ್ಮಾಂಧರ ಅತ್ಯಾಚಾರದ ವಿರುದ್ಧ ಸಂಘಟಿತರಾಗಿ ಹೋರಾಡಲು ಪ್ರತಿಜ್ಞೆ ಮಾಡಿದರು.
೩.ಹಿಂದೂಗಳೇ, ನಿಮ್ಮ ಶ್ರದ್ಧಾಸ್ಥಾನದ ಮೇಲೆ ಹೆಚ್ಚುತ್ತಿರುವ ಆಘಾತವನ್ನು ಅರಿತುಕೊಳ್ಳಿರಿ!
ಹಿಂದೂದ್ವೇಷಿಗಳು ಉರಣ (ಮಹಾರಾಷ್ಟ್ರ) ಎಂಬಲ್ಲಿನ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದಲ್ಲಿನ ಶ್ರೀನಾರಾಯಣ, ಶ್ರೀಲಕ್ಷ್ಮೀದೇವಿ ಮತ್ತು ಗರುಡ ಇತ್ಯಾದಿ ಮೂರ್ತಿಗಳನ್ನು ಧ್ವಂಸ ಮಾಡಿದ್ದಾರೆ. ಪೊಲೀಸರು ‘ಈ ಕೃತ್ಯವನ್ನು ಯಾರೋ ತಲೆತಿರುಕನು ಮಾಡಿರಬಹುದು’ ಎಂದು ಹೇಳಲು ಪ್ರಯತ್ನಿಸಿದರು.
೪.ಹಿಂದೂಗಳೇ, ಕಾಂಗ್ರೆಸ್ಸಿನ ಓಲೈಕೆಯಿಂದ ಮದವೇರಿದ ಧರ್ಮಾಂಧರ ಆಕ್ರಮಣವನ್ನು ಅರಿತುಕೊಳ್ಳಿರಿ!
ಬರೇಲಿ (ಉತ್ತರ ಪ್ರದೇಶ) ಯ ಫರೀದಪುರದಲ್ಲಿ ಧರ್ಮಾಂಧರಿಂದ ಹಿಂದೂ ಯಾತ್ರಿಕರ ಮೇಲೆ ಆಕ್ರಮಣ ಮಾಡಲಾಗಿದೆ. ಆ ಸಮಯದಲ್ಲಿ ಧರ್ಮಾಂಧರಿಂದ ಅನೇಕ ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸುತ್ತಿರುವಾಗ ೧೨ ಪೊಲೀಸರು ಗಾಯಗೊಂಡರು.
೫.ಹಿಂದೂಗಳೇ, ಕಾಂಗ್ರೆಸ್ಸಿನ ಓಲೈಕೆಯಿಂದ ಅಟ್ಟಹಾಸ ಹೆಚ್ಚಿದ ಧರ್ಮಾಂಧರ ಭಯೋತ್ಪಾದನೆಯನ್ನು ಅರಿತುಕೊಳ್ಳಿರಿ!
ಧರ್ಮಾಂಧರು ಕಾಶ್ಮೀರದಲ್ಲಿನ ಸಿಕ್ಖರಿಗೆ, ‘ನಮ್ಮ ಧರ್ಮವನ್ನು ಸ್ವೀಕರಿಸಿ ಇಲ್ಲದಿದ್ದರೆ ಕಾಶ್ಮೀರದಿಂದ ತೊಲಗಿ’ ಎಂದು ಬೆದರಿಕೆಯೊಡ್ಡಿದ್ದಾರೆ. ಕಾಶ್ಮೀರದ ಧರ್ಮಾಂಧರು ೧೯೮೯ರಲ್ಲಿ ಹಿಂದೂಗಳಿಗೆ ಇಂತಹದ್ದೇ ಬೆದರಿಕೆಯೊಡ್ಡಿ ಹಿಂದೂಗಳ ವಂಶವಿಚ್ಛೇದನ ಮಾಡಿದ್ದರು.
೬.ದೇವಸ್ಥಾನ ಸರಕಾರಿಕರಣದ ದುಷ್ಪರಿಣಾಮವನ್ನು ಅರಿತುಕೊಳ್ಳಿರಿ!
ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ ಭಗವಾನ ವೆಂಕಟೇಶ್ವರನಿಗೆ ಅರ್ಪಿಸಿದ ಪ್ರಾಚೀನ ಕಾಲದ ಆಭರಣಗಳು ಕಾಣೆಯಾಗಿವೆ ಹಾಗೂ ಭಾವಿಕರಿಗೆ ದರ್ಶನಕ್ಕಾಗಿ ನೀಡುವ ಟಿಕೇಟ್‌ಗಳಿಂದ ಜಮೆಯಾಗುವ ಹಣದಲ್ಲಿ ಕೂಡಾ ದೊಡ್ಡ ಪ್ರಮಾಣದಲ್ಲಿ ಅವ್ಯವಹಾರ ನಡೆದಿದೆ.
೭.ಹಿಂದೂಗಳೇ, ಚೀನಾ ಡ್ರಗನಿನ ಸಂಕಟವನ್ನು ಅರಿತುಕೊಳ್ಳಿರಿ!
ಅಮೇರಿಕಾದ ಪೇಂಟಗನ್ ಎಂಬ ಸೈನ್ಯದ ಮುಖ್ಯಾಲಯವು ಪ್ರಕಟಿಸಿದ ವಾರ್ಷಿಕ ವರದಿಯಲ್ಲಿ ಚೀನಾವು ಭಾರತೀಯ ಸೀಮೆಯ ಹತ್ತಿರ ದೂರಗಾಮಿಕ್ಷೇಪಣಾಸ್ತ್ರಗಳನ್ನು ಸಜ್ಜುಗೊಳಿಸಿದೆ ಎಂದು ನೋಂದಾಯಿಸಿದೆ.
No comments:
Post a Comment