ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರಿಗೆ ಸೂಚನೆ
ಧರ್ಮಶಿಕ್ಷಣ ನೀಡಲು ತಾವೂ ಹೀಗೆ ಮಾಡಬಹುದು!
ಬೆಳಗಾವಿಯಲ್ಲಿ ಕೆಲವು ಕಡೆಗಳಲ್ಲಿ ಧರ್ಮಶಿಕ್ಷಣ ವರ್ಗಕ್ಕೆ ಬರುವವರು ತಮ್ಮ ಮಕ್ಕಳ ಹುಟ್ಟುಹಬ್ಬವನ್ನು ತಿಥಿಗನುಸಾರ ಮತ್ತು ಶಾಸ್ತ್ರೀಯ ಪದ್ಧತಿಯಿಂದ ಆಚರಿಸುತ್ತಾರೆ. ಆಗ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರನ್ನು ಕರೆಯುತ್ತಾರೆ ಮತ್ತು ಅವರಿಗೆ ತಿಥಿಗನುಸಾರ ಹುಟ್ಟು ಹಬ್ಬವನ್ನು ಆಚರಿಸುವ ಶಾಸ್ತ್ರವನ್ನು ತಿಳಿಸಲು ಹೇಳುತ್ತಾರೆ. ತಾವೂ ತಮ್ಮ ಜಿಲ್ಲೆಯಲ್ಲಿ ಹೀಗೆ ಮಾಡಲು ಸಾಧ್ಯವಾದರೆ ಹಾಗೆ ಮಾಡಬಹುದು. ಹುಟ್ಟು ಹಬ್ಬಕ್ಕೆ ನೆಂಟರು ಮತ್ತು ಇತರ ಜನರೂ ಬರುತ್ತಾರೆ. ಆ ಸಮಯದಲ್ಲಿ ನಾವೇ ಅವರಿಗೆ ‘ಯೋಗ್ಯ ಪದ್ಧತಿಯಿಂದ ಹುಟುಹಬ್ಬವನ್ನು ಹೇಗೆ ಆಚರಿಸುವುದು’, ಎಂಬುದನ್ನು ಹೇಳಿದರೆ ನಮಗೆ ಅವರೊಂದಿಗೆ ಆತ್ಮೀಯತೆ ನಿರ್ಮಾಣವಾಗುವುದು ಮತ್ತು ಅವರೂ ಧರ್ಮಾಚರಣೆ ಪ್ರಾರಂಭಿಸಬಹುದು. ಆ ಸಮಯದಲ್ಲಿ ನಾವು ಮುಂದಿನ ವಿಷಯಗಳನ್ನು ಮಾಡಬಹುದು.
೧.ಆ ಸ್ಥಳದಲ್ಲಿ ಧರ್ಮಶಿಕ್ಷಣದ ಧ್ವನಿಚಿತ್ರ-ಮುದ್ರಿಕೆ (ಸಿ.ಡಿ) ತೋರಿಸ ಬಹುದು ಅಥವಾ ಧಾರ್ಮಿಕ ಕೃತಿಗಳನ್ನು ಯೋಗ್ಯ ರೀತಿಯಿಂದ ಹೇಗೆ ಮಾಡಬೇಕು, ಎಂಬುದರ ಮಾಹಿತಿಯನ್ನು ಸ್ವಲ್ಪದರಲ್ಲಿ ಹೇಳಬಹುದು.
೨.ಸಾತ್ತ್ವಿಕ ಉತ್ಪಾದನೆಯಲ್ಲಿನ ವಸ್ತುವನ್ನು ಉಡುಗೊರೆ ಕೊಡಬಹುದು.

No comments:

Post a Comment