ಗರಿಕೆ(ದೂರ್ವೆ): ಗಣೇಶನ ಪೂಜೆಯಲ್ಲಿ ಗರಿಕೆಗೆ ವಿಶೇಷ ಮಹತ್ವವಿದೆ. ಇದನ್ನು ದೂರ್ವೆ ಎಂದೂ ಕರೆಯುತ್ತಾರೆ. ದೂರ್ವೆ ಈ ಶಬ್ದವು ದೂಃ ಅವಮ್ ಹೀಗೆ ಆಗಿದೆ. ‘ದೂಃ’ ಅಂದರೆ ದೂರದಲ್ಲಿ ಇದ್ದದ್ದು ಮತ್ತು ‘ಅವಮ್’ ಅಂದರೆ ಯಾವುದು ಹತ್ತಿರ ತರುತ್ತದೆಯೋ ಅದು. ದೂರದಲ್ಲಿರುವ ಗಣೇಶನ ಪವಿತ್ರಕಗಳನ್ನು ಯಾವುದು ಹತ್ತಿರ ತರುತ್ತದೆಯೋ, ಅದುವೇ ದೂರ್ವೆ ಯಾಗಿದೆ, ಅಂದರೆ ಗರಿಕೆಯಾಗಿದೆ. ಶ್ರೀ ಗಣಪತಿಗೆ ಅರ್ಪಿಸಬೇಕಾದ ಗರಿಕೆಯು ಎಳೆಯದಾಗಿರಬೇಕು. ಇದನ್ನೇ ‘ಬಾಲತೃಣಮ್’ ಎನ್ನುತ್ತಾರೆ. ಒಣಗಿದಾಗ ಅದನ್ನು ಒಂದು ವಿಧದ ಹುಲ್ಲೆಂದು ಪರಿಗಣಿಸಬಹುದು. ಗರಿಕೆಗಳಿಗೆ ೩, ೫, ೭ ಹೀಗೆ ಬೆಸ ಸಂಖ್ಯೆಯ ಗರಿಗಳಿರಬೇಕು.
ಕೆಂಪು ವಸ್ತುಗಳು: ಶ್ರೀ ಗಣಪತಿಯ ಬಣ್ಣವು ಕೆಂಪಾಗಿರುತ್ತದೆ. ಅವನ ಪೂಜೆಯಲ್ಲಿ ಕೆಂಪು ವಸ್ತ್ರ, ಕೆಂಪು ಹೂವು ಮತ್ತು ರಕ್ತಚಂದನವನ್ನು ಬಳಸುತ್ತಾರೆ. ಅವುಗಳ ಕೆಂಪು ಬಣ್ಣದಿಂದ ವಾತಾವರಣದಲ್ಲಿರುವ ಶ್ರೀ ಗಣಪತಿಯ ಪವಿತ್ರಕಗಳು ಮೂರ್ತಿಯ ಕಡೆಗೆ ಹೆಚ್ಚು ಪ್ರಮಾಣದಲ್ಲಿ ಆಕರ್ಷಿತವಾಗಿ ಮೂರ್ತಿಯನ್ನು ಜಾಗೃತಗೊಳಿಸಲು ಸಹಾಯವಾಗುತ್ತದೆ.

No comments:
Post a Comment