ಗಣೇಶ ಪೂಜೆ ಪ್ರಥಮ ಏಕೆ?

ಗಣಪತಿಯ ಅನುಮತಿಯಿಲ್ಲದೇ ಯಾವುದೇ ದಿಕ್ಕಿನಿಂದ ಇತರ ದೇವತೆಗಳು ಪೂಜಾಸ್ಥಳಕ್ಕೆ ಬರಲಾರರು; ಆದುದರಿಂದ ಎಲ್ಲ ಮಂಗಲಕಾರ್ಯಗಳಲ್ಲಿ ಅಥವಾ ಇತರ ಯಾವುದೇ ದೇವತೆಯ ಪೂಜೆ ಮಾಡುವಾಗ ಮೊದಲು ಗಣಪತಿಯ ಪೂಜೆ ಮಾಡುತ್ತಾರೆ. ಒಮ್ಮೆ ಗಣಪತಿಯು ದಿಕ್ಕುಗಳನ್ನು ಮುಕ್ತ ಮಾಡಿದರೆ ಯಾವ ದೇವತೆಯ ಪೂಜೆ ಮಾಡುವುದಿರುತ್ತದೆಯೋ, ಆ ದೇವತೆಯು ಪೂಜಾ ಸ್ಥಳಕ್ಕೆ ಬರಬಹುದು. ಇದನ್ನೇ ಮಹಾದ್ವಾರದ ಅಥವಾ ಮಹಾ ಗಣಪತಿಯ ಪೂಜೆ ಎನ್ನುತ್ತಾರೆ.

No comments:

Post a Comment