ಇತ್ತೀಚೆಗೆ ಶ್ರೀ ಗಣೇಶಮೂರ್ತಿಗಳನ್ನು ‘ಪ್ಲಾಸ್ಟರ್ ಆಫ್ ಪ್ಯಾರಿಸ್’ನಿಂದ ಮತ್ತು ಅಶಾಸ್ತ್ರೀಯ ರೂಪಗಳಲ್ಲಿ ತಯಾರಿಸಲಾಗುತ್ತಿದೆ. ಶ್ರೀ ಗಣೇಶ ಮೂರ್ತಿಯನ್ನು ಹರಿಯುವ ನೀರಿನಲ್ಲಿ ಅಥವಾ ಜಲಾಶಯಗಳಲ್ಲಿ ವಿಸರ್ಜಿಸುವುದು ಆವಶ್ಯಕವಾಗಿದೆ ಎಂದು ಶಾಸ್ತ್ರಗಳಲ್ಲಿ ಹೇಳಿದ್ದರೂ ಜಲ ಪ್ರದೂಷಣೆ, ನೀರಿನ ಕೊರತೆ ಇತ್ಯಾದಿಗಳಿಂದಾಗಿ ಕೆಲವು ಜನರು ಮೂರ್ತಿವಿಸರ್ಜನೆಯು ಒಂದು ಸಮಸ್ಯೆಯಾಗಿದೆ ಎಂದು ತಿಳಿಯುತ್ತಾರೆ.
ಇದಕ್ಕೆ ಉಪಾಯವೆಂದು ಕಳೆದ ವರ್ಷ ರಾಜ್ಯ ಸರಕಾರವು ನೀರಿನ ಟ್ಯಾಂಕ್‌ವುಳ್ಳ ಲಾರಿಯನ್ನು ಮೂರ್ತಿ ವಿಸರ್ಜನೆಗೆ ಒದಗಿಸಿತ್ತು. ಇದು ಅಶಾಸ್ತ್ರೀಯ ಹಾಗೂ ತಪ್ಪಿದೆ. ಏಕೆಂದರೆ ಮೂರ್ತಿಯನ್ನು ಜಲಾಶಯದಲ್ಲಿಯೇ ವಿಸರ್ಜನೆ ಮಾಡಬೇಕು.
೧. ಅಧ್ಯಾತ್ಮಶಾಸ್ತ್ರಕ್ಕನುಸಾರ ತಯಾರಿಸಿದ ಶ್ರೀ ಗಣೇಶಮೂರ್ತಿಯು ಪರಿಸರಕ್ಕೆ ಅನುಕೂಲಕರವೇ ಆಗಿರುತ್ತದೆ!: ಅಧ್ಯಾತ್ಮಶಾಸ್ತ್ರಕ್ಕನುಸಾರ, ಅಂದರೆ ಮೂರ್ತಿ ಶಾಸ್ತ್ರಕ್ಕನುಸಾರ ಶ್ರೀ ಗಣೇಶನ ಮೂರ್ತಿಯು ಜೇಡಿಮಣ್ಣಿನಿಂದ ತಯಾರಿಸಿದ ಮತ್ತು ನೈಸರ್ಗಿಕ ಬಣ್ಣಗಳನ್ನು ಹಚ್ಚಿದ್ದಿರಬೇಕು. ಮೂರ್ತಿಶಾಸ್ತ್ರಕ್ಕನುಸಾರ ತಯಾರಿಸಿದ ಶ್ರೀ ಗಣೇಶಮೂರ್ತಿಯಲ್ಲಿ ಶ್ರೀ ಗಣೇಶತತ್ತ್ವವು ಬಹಳಷ್ಟು ಪ್ರಮಾಣದಲ್ಲಿ ಆಕರ್ಷಿಸಿ ಭಾವಿಕರಿಗೆ ಅದರ ಲಾಭವಾಗುತ್ತದೆ. ಅಂದರೆ ಅಧ್ಯಾತ್ಮಶಾಸ್ತ್ರಕ್ಕನುಸಾರ ಮಾಡಿದ ಯಾವುದೇ ವಿಷಯವು ನಿಸರ್ಗಕ್ಕೆ ಪೂರಕ ಅಂದರೆ ಪರಿಸರಕ್ಕೆ ಅನುಕೂಲಕರವೇ ಆಗಿರುತ್ತದೆ.
೨.ಇಂತಹ ಮೂರ್ತಿ ವಿಸರ್ಜನೆಯಿಂದ ಜಲಪ್ರದೂಷಣೆಯಾಗದೇ ಆಧ್ಯಾತ್ಮಿಕ ಲಾಭವಾಗುವುದು : ಮೂರ್ತಿ ಯಲ್ಲಿರುವ ಚೈತನ್ಯದಿಂದ ಅದನ್ನು ಹರಿಯುವ ನೀರಿನಲ್ಲಿ ವಿಸರ್ಜನೆ ಮಾಡುವುದರಿಂದ ನೀರು ಪವಿತ್ರವಾಗುತ್ತದೆ. ಹರಿಯುವ ನೀರಿನಿಂದಾಗಿ ಈ ಪವಿತ್ರಕಗಳು ದೂರದ ವರೆಗೆ ಹೋಗುತ್ತವೆ ಮತ್ತು ಅನೇಕರಿಗೆ ಅದರ ಲಾಭವಾಗುತ್ತದೆ. ಈ ನೀರಿನ ಬಾಷ್ಪೀ ಭವನವಾಗುವುದರಿಂದ ವಾತಾವರಣ ಸಾತ್ತ್ವಿಕವಾಗಲು ಸಹಾಯವಾಗುತ್ತದೆ.
ಆಪತ್ಕಾಲದಲ್ಲಿ ಗಣೇಶನ ಮೂರ್ತಿಯನ್ನು ಹೇಗೆ ವಿಸರ್ಜಿಸಬೇಕು?: ಕೆಲವೊಂದು ಸ್ಥಳಗಳಲ್ಲಿ ಜಲಾಶಯಗಳಲ್ಲಿ (ಬಾವಿ, ಕೆರೆ, ನದಿ, ಹಳ್ಳ ಇತ್ಯಾದಿಗಳಲ್ಲಿ) ಗಣೇಶ ಮೂರ್ತಿಯ ವಿಸರ್ಜನೆಗೆ ಬೇಕಾಗುವಷ್ಟು ನೀರು ಇರುವುದಿಲ್ಲ. ಕೆಲವೊಮ್ಮೆ ಜಲಾಶಯಗಳಲ್ಲಿ ನೀರು ಕಲುಷಿತವಾಗಿರುವುದರಿಂದ ಮೂರ್ತಿ ವಿಸರ್ಜನೆಗೆ ಯೋಗ್ಯವಾಗಿರುವುದಿಲ್ಲ. ಆಗ ಮುಂದಿನ ಎರಡು ಪ್ರಕಾರದ ಉಪಾಯಗಳನ್ನು ಮಾಡಬಹುದು.
೧.ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡದೇ ಅಡಿಕೆಯನ್ನು ಇಟ್ಟು ಪೂಜಿಸಬೇಕು. ಅಡಿಕೆಯನ್ನು ಸ್ವಲ್ಪ ನೀರಿರುವ ಬಾವಿ ಅಥವಾ ಹಳ್ಳದಲ್ಲಿ ವಿಸರ್ಜಿಸಬಹುದು.
೨.ಶ್ರೀ ಗಣೇಶ ಚತುರ್ಥಿಗಾಗಿ ಧಾತುವಿನ (ಲೋಹದ) ಒಂದು ಹೊಸ ಮೂರ್ತಿ ಯನ್ನು ತಂದು ಅದಕ್ಕೆ ಪ್ರಾಣಪ್ರತಿಷ್ಠಾಪನೆ ಮಾಡಿ ಪೂಜಿಸಬೇಕು. ವಿಸರ್ಜನೆ ಸಮಯದಲ್ಲಿ ಇಂತಹ ಮೂರ್ತಿಯನ್ನು ನೀರಿನಲ್ಲಿ ವಿಸರ್ಜನೆ ಮಾಡುವ ಅವಶ್ಯಕತೆ ಇರುವುದಿಲ್ಲ, ಉತ್ತರಪೂಜೆಯಾದ ನಂತರ ಗಣಪತಿಯ ಕೈಯ ಮೇಲೆ ಅಕ್ಷತೆಯನ್ನು ಹಾಕಿ ಮೂರ್ತಿಯನ್ನು ಬಲಗೈಯಿಂದ ಆ ಸ್ಥಳದಿಂದ ಸ್ವಲ್ಪ ಸರಿಸಬೇಕು. ಅನಂತರ ಮೂರ್ತಿಯನ್ನು ಮನೆಯಲ್ಲಿನ ಯಾವುದಾದರೊಂದು ಪವಿತ್ರ ಸ್ಥಳದಲ್ಲಿ ಇಡಬೇಕು. ಉತ್ತರಪೂಜೆಯ ನಂತರ ಆ ಮೂರ್ತಿಯಲ್ಲಿನ ದೈವತ್ವವೂ ವಿಸರ್ಜಿಸಲ್ಪಡುತ್ತದೆ. ಆದುದರಿಂದ ಇಂತಹ ಮೂರ್ತಿಯ ಪೂಜೆಯನ್ನು ಪ್ರತಿದಿನ ಮಾಡಬೇಕಾಗಿಲ್ಲ. ಮುಂದಿನ ವರ್ಷ ಮತ್ತೆ ಈ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಮಾಡಿ ಪೂಜೆಯನ್ನು ಮಾಡಬಹುದು.
No comments:
Post a Comment