ಗಣೇಶೋತ್ಸವದ ನಿಮಿತ್ತ ನಾವೆಲ್ಲರೂ ಒಂದಾಗುತ್ತೇವೆ. ನಮ್ಮ ಮನೆಗೆ ಗಣಪತಿ ಬರು ವವನಿದ್ದಾನೆ ಎಂಬ ಕಲ್ಪನೆಯಿಂದ ನಮ್ಮ ಮನಸ್ಸು ತುಂಬಿರುತ್ತದೆ. ಕೆಲವು ಕುಟುಂಬಗಳಲ್ಲಿಯಂತೂ ಶ್ರೀ ಗಣೇಶ ಚತುರ್ಥಿಯ ಸಿದ್ಧತೆಯು ಒಂದು ತಿಂಗಳ ಮೊದಲೇ ಪ್ರಾರಂಭವಾಗಿರುತ್ತದೆ. ಸಂಪೂರ್ಣ ಮನೆಯ ಸ್ವಚ್ಛತೆ ಮಾಡುವುದು, ಮನೆಗೆ ಬಣ್ಣ ಹಚ್ಚುವುದು ಮುಂತಾದ ಸೇವೆಗಳು ಪ್ರಾರಂಭವಾಗಿರುತ್ತವೆ. ಆದರೆ ನಾವು ಉತ್ಸವದ ಮನೋರಂಜನೆಯಲ್ಲಿ ಯಾವಾಗ ಮುಳುಗಿ ಹೋಗುತ್ತೇವೆಯೋ ಗೊತ್ತಾಗುವುದಿಲ್ಲ. ಇದರಿಂದ ಗಣಪತಿಯು ಮನೆಯಲ್ಲಿದ್ದಾನೆ ಎಂದು ನಾವು ಮರೆತು ಬಿಡುತ್ತೇವೆ. ಈ ಉತ್ಸವದಲ್ಲಿ ನಾವು ನಮ್ಮ ಅಯೋಗ್ಯ ಕೃತಿಗಳನ್ನು ಸರಿಪಡಿಸಿ ಕೆಳಗಿನಂತೆ ಕೃತಿ ಮಾಡಿದರೆ ಶ್ರೀ ಗಣೇಶ ನಿಂದ ಆಧ್ಯಾತ್ಮಿಕ ಲಾಭ ದೊರಕುವುದು.
೧. ಮನೆ ಮತ್ತು ಪರಿಸರ
ಅ. ಸಾಕ್ಷಾತ್ ಶ್ರೀ ಗಣೇಶನು ನಮ್ಮ ಮನೆಗೆ ಬರುವವನಿದ್ದಾನೆ ಎಂಬ ಭಾವವನ್ನಿರಿಸಿ ಎಲ್ಲ ಪೂರ್ವತಯಾರಿಗಳನ್ನು ಮಾಡುವುದು
ಆ. ಕುಟುಂಬದವರೆಲ್ಲ ಒಂದು ದಿನ ಮೊದಲೇ ಬರುವುದು
ಇ. ಮನೆ ಮತ್ತು ಪರಿಸರದ ಸ್ವಚ್ಛತೆ, ಅಲಂಕಾರ, ಪೂಜೆಯ ತಯಾರಿ ಇತ್ಯಾದಿ ಸೇವೆಗಳನ್ನು ಎಲ್ಲರೂ ಸೇರಿ ಮಾಡುವುದು
ಈ. ಗಣೇಶೋತ್ಸವದಲ್ಲಿ ಗಣಪತಿಗೆ ಮೊದಲ ಮಹತ್ವ ಮತ್ತು ಅಲಂಕಾರ ಮತ್ತು ಆಡಂಬರಕ್ಕೆ ದ್ವಿತೀಯ ಮಹತ್ವವನ್ನು ಕೊಡಬೇಕು ಎಂಬ ಅರಿವಿಟ್ಟುಕೊಂಡಿರಬೇಕು (ಗಣಪತಿಯ ಮೂರ್ತಿಯನ್ನು ಇಡುವ ಸ್ಥಳವನ್ನು ನಿರಂತರವಾಗಿ ಸ್ವಚ್ಛವಾಗಿರಿಸುವುದು, ಅಲ್ಲಿ ದೀಪ ಬೆಳಗಿಸಿಡುವುದು, ಪ್ರತ್ಯಕ್ಷ ಗಣಪತಿಯೇ ಅಲ್ಲಿ ಕುಳಿತಿದ್ದಾನೆ ಎಂಬ ಭಾವದಿಂದ ವ್ಯವಹರಿಸುವುದು)
ಉ. ಮನೆಯ ಮುಖ್ಯದ್ವಾರಕ್ಕೆ ಮಾವಿನ ಎಲೆ ಮತ್ತು ಗೊಂಡೆ ಹೂವುಗಳ ಸಾತ್ತ್ವಿಕ ತೋರಣವನ್ನು ಕಟ್ಟುವುದು, ಮನೆಯೆದುರು ಹಾಗೂ ಗಣಪತಿಯ ಎದುರು ಸಾತ್ತ್ವಿಕ ರಂಗೋಲಿಯನ್ನು ಹಾಕುವುದು ಮತ್ತು ಅದನ್ನು ಹಾಕುವಾಗ ನಮ್ಮೊಂದಿಗೆ ಮಕ್ಕಳನ್ನು ಸೇರಿಸಿಕೊಳ್ಳುವುದು
ಊ. ಪ್ರತಿದಿನ ಗಣಪತಿಗೆ ಗರಿಕೆಯನ್ನು ಅರ್ಪಿಸುವುದು
೨. ಮೂರ್ತಿ
ಆವೆ(ಜೇಡಿ) ಮಣ್ಣಿನಿಂದ ತಯಾರಿಸಿದ ಮತ್ತು ಮಣೆಯ ಮೇಲೆ ಕುಳಿತುಕೊಂಡಿರುವ, ಮೂರ್ತಿಶಾಸ್ತ್ರಕ್ಕನುಸಾರ ತಯಾರಿಸಿದ, ನೈಸರ್ಗಿಕ ಬಣ್ಣಗಳನ್ನು ಹಚ್ಚಿದ ಮೂರ್ತಿಯನ್ನಿರಿಸಬೇಕು.
೩. ಧಾರ್ಮಿಕ ವಿಧಿಗಳು
ಅ. ಪೂಜೆಯನ್ನು ಮಾಡುವವರು ಪೂಜೆಯ ಸಂಪೂರ್ಣ ತಯಾರಿಯನ್ನು ಮಾಡಿಕೊಂಡು ಶುಚಿರ್ಭೂತರಾಗಿರಬೇಕು.
ಆ. ಧಾರ್ಮಿಕ ವಿಧಿಗಳಲ್ಲಿನ ಚೈತನ್ಯದ ಲಾಭವನ್ನು ಪುರೋಹಿತರ ಹಾಗೂ ಯಜಮಾನರ ಜೊತೆಗೆ ಎಲ್ಲರೂ ಆ ಜಾಗದಲ್ಲಿ ಉಪಸ್ಥಿತರಿದ್ದುಕೊಂಡು ಪಡೆದುಕೊಳ್ಳಬೇಕು.
ಇ. ಧಾರ್ಮಿಕ ವಿಧಿಗಳನ್ನು ಔಪಚಾರಿಕತೆ ಎಂದು ಮಾಡದೇ ಅದರ ಹಿಂದಿನ ಶಾಸ್ತ್ರವನ್ನು ಅರಿತುಕೊಳ್ಳಲು ಪ್ರಯತ್ನಿಸಬೇಕು ಮತ್ತು ಪೂಜಾಸ್ಥಳದಲ್ಲಿ ಶಿಸ್ತು ಮತ್ತು ಪಾವಿತ್ರವನ್ನು ಕಾಪಾಡಬೇಕು.
೪. ಆರತಿ
ಅ. ೪ ರಿಂದ ೫ ಆರತಿಗಳನ್ನು ಹಾಡಬೇಕು. ಆರತಿಯ ಶಬ್ದಗಳತ್ತ ಗಮನ ಕೊಟ್ಟು ಶ್ರೀ ಗಣೇಶನನ್ನು ಭಕ್ತಿ ಭಾವದಿಂದ ಸ್ಮರಿಸುತ್ತಾ ಭಾವದಿಂದ ಆರತಿಯನ್ನು ಹಾಡಬೇಕು.
ಆ. ತಾಳವನ್ನು ಯೋಗ್ಯ, ಲಯಬದ್ಧ ಧ್ವನಿಯಲ್ಲಿ ಬಾರಿಸಬೇಕು.
ಇ. ‘ಶ್ರೀ ಗಣೇಶನೇ, ದಿನವಿಡೀ ಮಾಡಿದ ಪ್ರತಿಯೊಂದು ಕೃತಿಯು ನಿಮ್ಮ ಕೃಪಾಶೀರ್ವಾದದಿಂದಲೇ ನಡೆಯುತ್ತಿದೆ ಎನ್ನುವ ಅರಿವಿರಲಿ ಮತ್ತು ನಮ್ಮ ಭಕ್ತಿಭಾವವು ಹೆಚ್ಚಾಗಲಿ’ ಎಂದು ಪ್ರಾರ್ಥಿಸಬೇಕು.
No comments:
Post a Comment