೧.ಹಿಂದೂಗಳೇ, ಜಾತ್ಯತೀತ ರಾಜಕಾರಣಿಗಳು ಹಿಂದೂದ್ರೋಹ ಮತ್ತು ಜಿಹಾದಿ ಭಯೋತ್ಪಾದಕರ ಪಕ್ಷ ವಹಿಸುವುದನ್ನು ಅರಿತುಕೊಳ್ಳಿರಿ!
ರಾಷ್ಟ್ರವಾದಿ ಕಾಂಗೆಸ್ಸಿನ ಶರದ ಪವಾರರು, ‘ಭಾಜಪದವರಿಗೆ ‘ಹಸಿರು ಭಯೋತ್ಪಾದನೆ’ ಎಂಬ ಶಬ್ದ ನಡೆಯುತ್ತದೆಯಾದರೆ, ‘ಭಗವಾ ಭಯೋತ್ಪಾದನೆ’ ಎಂದರೆ ಏಕೆ ನಡೆಯುವುದಿಲ್ಲ? ಭಗವಾ ತ್ರಿವರ್ಣದಲ್ಲಿದೆಯೆಂದು ನಡೆಯದಿದ್ದರೆ, ಹಸಿರು ಬಣ್ಣವೂ ತ್ರಿವರ್ಣದಲ್ಲಿದೆಯಲ್ಲ.
೨.ಹಿಂದೂಗಳೇ, ಹಿಂದೂದ್ರೋಹಿ ಜಾತ್ಯತೀತ ಸರಕಾರದ ಕ್ರೈಸ್ತ ಪ್ರೇಮವನ್ನು ಅರಿತುಕೊಳ್ಳಿರಿ!
ಅನೇಕ ಹಿಂದೂಗಳನ್ನು ಮತಾಂತರ ಮಾಡಿದ ಆರೋಪವಿರುವ ಕ್ರೈಸ್ತರ ಸಂತ ತೆರೆಸಾರವರ ಜನ್ಮಶತಾಬ್ಧಿಯ ನಿಮಿತ್ತ ಕಾಂಗ್ರೆಸ್ ಸರಕಾರವು ಅವರ ಚಿತ್ರವಿರುವ ರೂ.೫ರ ನಾಣ್ಯವನ್ನು ಹೊರ ತಂದಿದೆ. ಹಿಂದೂ ಸಂತರ ಚಿತ್ರವಿರುವ ನಾಣ್ಯಗಳನ್ನು ಈ ಸರಕಾರವು ಎಂದಾದರೂ ಹೊರ ತಂದಿದೆಯೇ?
೩.ಹಿಂದೂಗಳೇ, ಕೆಸ್ತ ಶಾಲೆಗಳ ಹಿಂದೂದ್ವೇಷವನ್ನು ಅರಿತುಕೊಳ್ಳಿರಿ!
ಜಾಲನಾ ಎಂಬಲ್ಲಿ ಸೇಂಟ್ ಮೇರಿ ಮಾಧ್ಯಮಿಕ ಶಾಲೆಯಲ್ಲಿ ರಕ್ಷಾ ಬಂಧನದ ದಿನದಂದು ರಾಖಿ ಕಟ್ಟಿ ಬಂದ ವಿದ್ಯಾರ್ಥಿಗಳನ್ನು ಶಿಕ್ಷಕರು ಥಳಿಸಿ ೨೦೦ ಬಸ್ಕಿ ತೆಗೆಯಲು ಹೇಳಿದರು. ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ಮಧ್ಯ ಪ್ರವೇಶಿಸಿ ವಿದ್ಯಾಲಯದಲ್ಲಿ ನಡೆಯುತ್ತಿರುವ ವಿವಿಧ ರೀತಿಯ ಹಿಂದೂದ್ವೇಷಿ ಕೃತ್ಯಗಳು ಇನ್ನು ನಡೆಯುವುದಿಲ್ಲವೆಂದು ಮುಖ್ಯೋಪಾಧ್ಯಾಯರಿಂದ ಆಶ್ವಾಸನೆ ತೆಗೆದುಕೊಂಡರು.
೪.ಹಿಂದೂಗಳೇ, ಹಿಂದೂದ್ರೋಹಿ ಮತ್ತು ಪ್ರಜಾಪ್ರಭುತ್ವದ್ರೋಹಿ ಕಾಂಗ್ರೆಸ್ ರಾಜ್ಯದಲ್ಲಿನ ನಿಮ್ಮ ದಯನೀಯ ಸ್ಥಿತಿಯನ್ನು ಅರಿತುಕೊಳ್ಳಿರಿ!
ಮಾನಸಿಕ ರೋಗಿ ಗಂಗಾಧರ ವರಾಟ (ವಯಸ್ಸು ೨೭) ಎಂಬ ಯುವಕನು ಆಂಧ್ರಪ್ರದೇಶದ ಮೆಹಬೂಬಾಬಾದ ಎಂಬಲ್ಲಿ ಗೋಹತ್ಯೆ ನಿಷೇಧದ ಬಗ್ಗೆ ಆಗ್ರಹಿಸುವ ಹಾಗೂ ಕಾಂಗ್ರೆಸ್ಸಿನ ವಿರುದ್ಧ ಮತ್ತು ಭಾರತಮಾತೆಯ ವಿಜಯದ ಘೋಷಣೆ ನೀಡಿದನೆಂದು ಅಜ್ಞಾತರು ಅವನನ್ನು ಜೀವಂತ ಸುಟ್ಟರು.
೫.ಹಿಂದೂಗಳೇ, ಭಾಜಪದ ಕರ್ನಾಟಕದಲ್ಲಿನ ಧರ್ಮಾಂಧರ ದುಃಸಾಹಸವನ್ನು ಅರಿತುಕೊಳ್ಳಿ!
ಗುಲ್ಬರ್ಗಾದಲ್ಲಿನ ಹನುಮಂತನ ದೇವಸ್ಥಾನದಲ್ಲಿನ ಮಾರುತಿ, ಶಿವ ಮತ್ತು ನಾಗ ಇತ್ಯಾದಿ ದೇವತೆಗಳ ಮೂರ್ತಿಗಳನ್ನು ಧರ್ಮಾಂಧರು ಧ್ವಂಸಗೊಳಿಸಿದರು. ಇದರ ವಿರುದ್ಧ ಪ್ರತಿಭಟನೆ ಮಾಡುವ ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿಯವರಿಗೆ ಧರ್ಮಾಂಧರು ಮತ್ತು ಕಾಂಗ್ರೆಸ್ ನೇತಾರರು ಬೆದರಿಕೆ ಹಾಕಿದ್ದಾರೆ.
೬. ಹಿಂದೂಗಳೇ, ಪಾಕಿಸ್ತಾನದಲ್ಲಿನ ಹಿಂದೂಗಳ ದಯನೀಯ ಸ್ಥಿತಿಯ ವಾರ್ತೆಯನ್ನು ಪ್ರಸಾರ ಮಾಡದಿರುವ ಹಿಂದೂದ್ವೇಷಿ ಪ್ರಸಾರಮಾಧ್ಯಮಗಳನ್ನು ಬಹಿಷ್ಕರಿಸಿ!
ಪೈಗಂಬರರ ಅವಮಾನ ಮಾಡುವ ಘೋಷಣೆಯನ್ನು ಗೋಡೆ ಮೇಲೆ ಬರೆದರೆಂಬ ಸುಳ್ಳು ಆರೋಪ ಹೊರಿಸಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯ ದಲ್ಲಿನ ಮಿರಪೂರಕಸ ಜಿಲ್ಲೆಯಲ್ಲಿನ ಮೀರ ವಾಹ ಗೋರಚಾನಿ ಎಂಬ ನಗರದಲ್ಲಿನ ೬೦ ಹಿಂದೂ ಕುಟುಂಬಗಳ ಮೇಲೆ ಧರ್ಮಾಂಧರು ಆಕ್ರಮಣ ನಡೆಸಿ ಅವರನ್ನು ಮನೆಯಿಂದ ಹೊರದಬ್ಬಿದ್ದಾರೆ.
೭.ಹಿಂದೂಗಳೇ, ‘ರಿಲಾಯನ್ಸ್’ ಕಂಪನಿಯಿಂದ ದ್ರೌಪದಿಯ ಘೋರ ವಿಡಂಬನೆಯನ್ನು ಅರಿತುಕೊಳ್ಳಿ!
‘ರಿಲಾಯನ್ಸ್ ಕಮ್ಯುನಿಕೇಶನ್ ಲಿಮಿಟೆಡ್’ವು ಗ್ರಾಹಕರಿಗೆ ಕಳುಹಿಸಿದ ಒಂದು ಅಶ್ಲೀಲ ಲಘುಸಂದೇಶದ ಮೂಲಕ ಹಿಂದೂಗಳ ಶ್ರದ್ಧಾ ಸ್ಥಾನವಾಗಿರುವ ದ್ರೌಪದಿಯ ಘೋರ ವಿಡಂಬನೆ ಮಾಡಿದೆ. ಹಿಂದೂಗಳು ಮುಂದಿನ ಸಂಖ್ಯೆಯಲ್ಲಿ ರಿಲಾಯನ್ಸ್‌ಗೆ ಖಂಡಿಸುತ್ತಿದ್ದಾರೆ
ದೂ.ಕ್ರ. ಹೊಸ ಮುಂಬಯಿ : (೦೨೨) ೩೦೩೭ ೩೩೩೩, ವಿ-ಅಂಚೆ: customercare@relianceada.com
No comments:
Post a Comment