ಧಾರ್ಮಿಕಕೃತಿಗಳಶಾಸ್ತ್ರ

ದೇವರಪೂಜೆಯ ಉಪಕರಣ : ತುಪ್ಪದ ದೀಪದ ಮಹತ್ವ
ಆಧ್ಯಾತ್ಮಿಕ ದೃಷ್ಟಿಯಿಂದ ತುಪ್ಪದ ದೀಪವು ಎಣ್ಣೆಯ ದೀಪಕ್ಕಿಂತ ಅಧಿಕ ಸತ್ತ್ವಗುಣಿಯಾಗಿದೆ. ಇದು ಒಂದು ಮಹತ್ವಪೂರ್ಣ ಅಂಶವಾಗಿದೆ. ಇವೆರಡುಗಳ ನಡುವಿನ ವ್ಯತ್ಯಾಸ ಅದೇ ರೀತಿ ತುಪ್ಪದ ದೀಪದಿಂದ ನಮ್ಮ ಮೇಲಾಗುವ ವಿವಿಧ ರೀತಿಯ ಪರಿಣಾಮಗಳ ಬಗ್ಗೆಯೂ ಈ ವಾರದ ಅಂಕಣದಲ್ಲಿ ತಿಳಿದುಕೊಳ್ಳೋಣ.
ಆಧ್ಯಾತ್ಮಿಕ ದೃಷ್ಟಿಕೋನದಿಂದ ಎಣ್ಣೆ ಮತ್ತು ತುಪ್ಪದ ದೀಪದಲ್ಲಿ ಏನು ವ್ಯತ್ಯಾಸವಿದೆ?
೧.ಎಣ್ಣೆಯ ದೀಪದ ತುಲನೆಯಲ್ಲಿ ತುಪ್ಪದ ದೀಪದಲ್ಲಿ ವಾತಾವರಣದಲ್ಲಿರುವ ಸಾತ್ತ್ವಿಕ ಸ್ಪಂದನಗಳನ್ನು ಆಕರ್ಷಿಸುವ ಕ್ಷಮತೆಯು ಅತ್ಯಧಿಕವಾಗಿರುತ್ತದೆ.
೨.ಜ್ವಲನ ದ್ರವ್ಯವು ಮುಗಿದ ನಂತರ ಅಥವಾ ಇತರ ಕಾರಣಗಳಿಂದ ದೀಪದ ಜ್ಯೋತಿಯು ಶಾಂತವಾದರೆ ಆಗ ಆಧ್ಯಾತ್ಮಿಕ ಸ್ತರದಲ್ಲಿ ಎರಡೂ ಅಂದರೆ ಎಣ್ಣೆಯ ದೀಪದ ಮೇಲೆ  ಮತ್ತು ತುಪ್ಪದ ದೀಪದ ಮೇಲೆ ಸ್ವಲ್ಪ ಪರಿಣಾಮವಾಗುತ್ತದೆ.
೩.ಎಣ್ಣೆಯ ದೀಪದ ಜ್ಯೋತಿಯು ಶಾಂತವಾದ ನಂತರ ರಜ ಕಣಗಳ ಪ್ರಾಬಲ್ಯವು ಹೆಚ್ಚುತ್ತದೆ ಮತ್ತು ಸುಮಾರು ಅರ್ಧ ಗಂಟೆಯ ವರೆಗೂ ವಾತಾವರಣದಲ್ಲಿ ಇದರ ಪ್ರಭಾವವಿರುತ್ತದೆ. ಆದರೆ ತುಪ್ಪದ ಜ್ಯೋತಿಯು ಶಾಂತವಾದ ನಂತರ ಸುಮಾರು ನಾಲ್ಕು ಗಂಟೆಯ ವರೆಗೂ ವಾತಾವರಣದಲ್ಲಿ  ಸಾತ್ತ್ವಿಕಕಣಗಳ ಪ್ರಭಾವವಿರುತ್ತದೆ.

ತುಪ್ಪ ಮತ್ತು ಎಣ್ಣೆಯ ದೀಪದಿಂದ ಪೂಜಕನ ಮೇಲೆ ಏನು ಪರಿಣಾಮವಾಗುತ್ತದೆ?
೧.ಎಣ್ಣೆಯ ದೀಪದಿಂದ ಪೂಜಕನ ಸುತ್ತಲೂ ನಿರ್ಮಾಣವಾಗುವ ಸೂಕ್ಷ್ಮ ಕವಚವು ಕನಿಷ್ಟ ಸ್ತರದ್ದಾಗಿರುತ್ತದೆ, ಆದರೆ ತುಪ್ಪದ ದೀಪದಿಂದ ಪೂಜಕನ ಸುತ್ತಲೂ ನಿರ್ಮಾಣವಾಗುವ ಸೂಕ್ಷ್ಮಕವಚವು ಉಚ್ಚ ಸ್ತರದ್ದಾಗಿರುತ್ತದೆ. 
೨.ಎಣ್ಣೆಯ ದೀಪದಿಂದ ಪ್ರಕ್ಷೇಪಿತವಾಗುವ ಸೂಕ್ಷ್ಮತರಂಗಗಳಿಂದ ಪೂಜಕನ  ಮನಃಶಕ್ತಿಯು ಕಾರ್ಯನಿರತವಾದರೆ ತುಪ್ಪದ ದೀಪದಿಂದ ಪ್ರಕ್ಷೇಪಿತವಾಗುವ ಸೂಕ್ಷ್ಮ ಲಹರಿಗಳಿಂದ ಪೂಜಕನ ಆತ್ಮಶಕ್ತಿಯು ಕಾರ್ಯನಿರತವಾಗುತ್ತದೆ.
೩.ಎಣ್ಣೆಯ ದೀಪದಿಂದ ಮೂಲಾಧಾರ ಮತ್ತು ಸ್ವಾಧಿಷ್ಠಾನಚಕ್ರ ಚಕ್ರಗಳು ಶುದ್ಧವಾದರೆ ತುಪ್ಪದದೀಪದಿಂದ ಮಣಿಪುರ ಮತ್ತು ಅನಾಹತಚಕ್ರಗಳು ಶುದ್ಧವಾಗುತ್ತದೆ.
೪.ಎಣ್ಣೆ ಮತ್ತು ತುಪ್ಪದ ದೀಪದಿಂದ  ಪೂಜಕನನಾಡಿಯ ಮೇಲಾಗುವ ಪರಿಣಾಮ: ಮನುಷ್ಯನಲ್ಲಿ ಏಳು ಚಕ್ರಗಳಿ ರುವಂತೆಯೇ, ಚೈತನ್ಯಪ್ರವಾಹದ ಕೆಲವು ಮಾರ್ಗಗಳು ಇರುತ್ತವೆ. ಇವನ್ನು ನಾಡಿಗಳು ಎನ್ನುತ್ತಾರೆ. ಚಂದ್ರನಾಡಿ, ಸೂರ್ಯನಾಡಿ ಮತ್ತು ಸುಷುಮ್ನಾನಾಡಿ, ಇವು ಮೂರು ಪ್ರಮುಖ ನಾಡಿಗಳಾಗಿವೆ. ಯಾವಾಗ ಚಂದ್ರನಾಡಿಯು ಕಾರ್ಯನಿರತವಾಗುವುದೋ, ಆಗ ಜೀವಕ್ಕೆ ಶೀತಲತೆ ಪ್ರಾಪ್ತವಾಗುತ್ತದೆ. ಅದೇರೀತಿ ಯಾವಾಗ ಸೂರ್ಯ ನಾಡಿಯು ಕಾರ್ಯನಿರತವಾಗುವುದೋ ಆಗ ಜೀವಕ್ಕೆ ಶಕ್ತಿಯು ಪ್ರಾಪ್ತವಾಗುತ್ತದೆ.  ಜೀವದ ಆಧ್ಯಾತ್ಮಿಕ ಉನ್ನತಿಯು ಆರಂಭವಾದಾಗ ಸುಷುಮ್ನಾನಾಡಿಯು ಕಾರ್ಯ ನಿರತವಾಗುತ್ತದೆ.
ಎಣ್ಣೆಯ ದೀಪದಿಂದ ಪೂಜಕನ ಸೂರ್ಯನಾಡಿಯು ಕಾರ್ಯನಿರತವಾಗುತ್ತದೆ. ಆದರೆ ತುಪ್ಪದದೀಪದಿಂದ ಪೂಜಕನು ಯಾವ ಕಾರ್ಯವನ್ನು ಮಾಡುವುದು ಅಪೇಕ್ಷಿತವಾಗಿದೆಯೋ ಅದಕ್ಕನುಸಾರ ನಾಡಿಯು ಕಾರ್ಯನಿರತವಾಗುತ್ತದೆ.
೫.ಎಣ್ಣೆ ಮತ್ತು ತುಪ್ಪದ ದೀಪದಿಂದ  ಪೂಜಕನಕೋಶಗಳ ಮೇಲಾಗುವ ಪರಿಣಾಮ: ನಮ್ಮ ಕಣ್ಣುಗಳಿಗೆ ಕಾಣಿಸುವ ಶರೀರವು ಅನ್ನಮಯ ಕೋಶ. ಇದನ್ನು ಹೊರತು ಪಡಿಸಿ ಮುಂದಿನ ಕೋಶಗಳಿವೆ - ಶರೀರಕ್ಕೆ ಶಕ್ತಿಯನ್ನು ಪೂರೈಸುವ ಪಂಚ ಪ್ರಾಣಗಳ ಸ್ಥಾನವಾದ ಪ್ರಾಣಮಯ ಕೋಶ. ಭಾವನೆಗಳ ಸ್ಥಾನವಾದ ಮನೋಮಯಕೋಶ ಮತ್ತು ಬುದ್ಧಿಯ ಸ್ಥಾನವಾದ ವಿಜ್ಞಾನಮಯ ಕೋಶ, ಸತ್- ಚಿತ್- ಆನಂದಮಯದ ಆತ್ಮದ ಸ್ಥಾನವಾಗಿರುವ ಆನಂದಮಯ ಕೋಶ.
ಎಣ್ಣೆಯ ದೀಪದಿಂದ  ಪ್ರಾಣಮಯ ಕೋಶದ  ರಜಕಣಗಳು ಪ್ರಬಲವಾಗುತ್ತವೆ.  ಇದರಿಂದ ಜೀವವು  ಚಂಚಲವಾಗುತ್ತದೆ. ತುಪ್ಪದ ದೀಪವು ಪ್ರಾಣಮಯ  ಮತ್ತು ಮನೋಮಯಕೋಶಗಳ ಸತ್ತ್ವಕಣಗಳನ್ನು ಪ್ರಬಲತೆಗೊಳಿಸುತ್ತದೆ. ಇದರಿಂದ ಜೀವವು ಶಾಂತ, ಸ್ಥಿರ ಮತ್ತು ಸಂತುಷ್ಠವಾಗುತ್ತದೆ.

No comments:

Post a Comment