ಇತ್ತೀಚೆಗೆ ಯಾವುದೇ ಧಾರ್ಮಿಕ ಕಾರ್ಯಕ್ರಮದಲ್ಲಿ ಪೂಜೆ ಮಾಡುವ ಯಜಮಾನ ಮತ್ತು ಪುರೋಹಿತರು ಒಂದೆಡೆ ಪೂಜೆ ಮಾಡುತ್ತಿದ್ದರೆ ಮನೆಯಲ್ಲಿ ಸೇರಿದ ಎಲ್ಲ ನೆಂಟರು ಇನ್ನೊಂದೆಡೆ ಮಾತುಕತೆ, ತಮಾಷೆ, ಮೋಜು ಮಾಡುತ್ತಿರುವುದು ಕಂಡುಬರುತ್ತದೆ. ನಾವು ಮಾಡುತ್ತಿರುವ ಧಾರ್ಮಿಕ ವಿಧಿಯ ಅಥವಾ ವ್ರತದ ಲಾಭವು ಎಲ್ಲ ವ್ಯಕ್ತಿಗಳಿಗೆ ಆಗುವುದು ಅಪೇಕ್ಷಿತವಿದೆ. ಹಾಗಾಗಿ ವ್ರತ ಅಥವಾ ವಿಧಿ ಮುಗಿಯುವ ವರೆಗೆ ಎಲ್ಲರೂ ಆ ಸ್ಥಳದಲ್ಲಿ ಶಾಂತವಾಗಿದ್ದು ವಿಧಿಯ ಸಾತ್ತ್ವಿಕತೆಯ ಲಾಭ ಪಡೆಯಬೇಕು!
ವ್ರತ ಮತ್ತು ವಿಧಿ ಮಾಡುವ ಸ್ಥಳವು ಎಷ್ಟು ಸ್ವಚ್ಛ ಹಾಗೂ ಸಾತ್ತ್ವಿಕವಾಗಿ ಇರುತ್ತದೆಯೋ ಅಷ್ಟೇ ಹೆಚ್ಚು ಚೈತನ್ಯದ ಲಾಭವಾಗುತ್ತದೆ. ಪೂಜೆಯ ಮೊದಲು ಪೂಜೆಯ ಸ್ಥಳ ಹಾಗೂ ಮನೆಯನ್ನು ಸ್ವಚ್ಛವಾಗಿ ಗುಡಿಸಿ ಗೋಮೂತ್ರ ಅಥವಾ ವಿಭೂತಿಯ ನೀರನ್ನು ಸಿಂಪಡಿಸಬೇಕು ಹಾಗೂ ಊದುಬತ್ತಿ ಅಥವಾ ಧೂಪವನ್ನು ತೋರಿಸಿ ಶುದ್ಧಗೊಳಿಸಬೇಕು. ಸೆಗಣಿಯಿಂದ ಸಾರಿಸಿದ ಸ್ಥಳವು ಹೆಚ್ಚು ಸಾತ್ತ್ವಿಕವಾಗಿರುತ್ತದೆ. ಮನೆ ಬಾಗಿಲಿನ ಹೊರಗೆ, ಪೂಜೆಯ ಆಸನ ಅಥವಾ ದೇವರ ಮಂಟಪದ ಸುತ್ತ ಸಾತ್ತ್ವಿಕ ರಂಗೋಲಿ ಹಾಕಬಹುದು. ಮನೆಯ ಮುಖ್ಯ ಬಾಗಿಲಿಗೆ ತೋರಣ ಕಟ್ಟಬೇಕು. ಪ್ರಾರ್ಥನೆ ಮಾಡಿ ಶಾಂತಚಿತ್ತದಿಂದ ಪೂಜೆ ಪ್ರಾರಂಭಿಸಬೇಕು.

No comments:
Post a Comment