ಸಾಧಕರಿಗೆ ಸೂಚನೆಗಳು

ಸಾಧಕರಿಗೆ ವರ್ತಮಾನ ಸ್ಥಿತಿಯಲ್ಲಿ ಪ್ರತಿನಿತ್ಯ ಸಾಧನೆಯ ಯಾವ ಮಟ್ಟದಲ್ಲಿ ಹೇಗೆ ಪ್ರಯತ್ನ ಮಾಡಬೇಕು, ಎಂಬುದನ್ನು ಗುರುತಿಸಲು ಪ.ಪೂ.ಭಕ್ತರಾಜ ಮಹಾರಾಜರ ಭಜನೆಯು ಒಂದು ಉತ್ತಮ ಮಾರ್ಗದರ್ಶಕವಾಗಿದೆ ಹಾಗೂ ಅದಕ್ಕೆ ಸಂಬಂಧಿಸಿದ ಹಂತಗಳು
ಬಹಳಷ್ಟು ಸಾಧಕರಿಗೆ ತಾವು ಸಾಧನಾ ಮಾರ್ಗದಲ್ಲಿ ಯೋಗ್ಯ ದಿಕ್ಕಿನಲ್ಲಿ ಪ್ರಯತ್ನ ಮಾಡುತ್ತಿದ್ದೇವೆಯೇ, ಇಲ್ಲವೇ ಎಂಬ ವಿಷಯದ ಬಗ್ಗೆ ಮನಸ್ಸಿನಲ್ಲಿ ಗೊಂದಲವುಂಟಾಗುತ್ತದೆ. ಇಂತಹ ಪ್ರಸಂಗಗಳಲ್ಲಿ ದೇವರಿಗೆ ಹೇಗೆ ಪ್ರಾರ್ಥನೆ ಮಾಡಬೇಕು, ಎಂಬುದು ಸಹ ತಿಳಿಯುವುದಿಲ್ಲ. ಈ ಪ್ರಕ್ರಿಯೆಯಲ್ಲಿ ಯಾರಿಗಾದರೂ ಕೇಳಿ ಮನಸ್ಸಿನ ನಿರಾಶೆಯನ್ನು ದೂರಗೊಳಿಸಬೇಕಿ ದ್ದರೂ ನಮ್ಮೊಂದಿಗೆ ಯಾವಾಗಲೂ ಯಾರದರೂ ಇರುತ್ತಾರೆ ಎಂದೇನಿಲ್ಲ. ಅಂತಹ ಸಮಯದಲ್ಲಿ ಮನಸ್ಸನ್ನು ಆನಂದ ಹಾಗೂ ಉತ್ಸಾಹದಲ್ಲಿರಿಸಲು ನಾವು ಮುಂದಿನ ಸ್ತರದಲ್ಲಿ ಉಪಾಯ ಮಾಡಬಹುದು. 

೧. ಬೆಳಗ್ಗೆ ಎದ್ದ ನಂತರ ಪ.ಪೂ. ಡಾಕ್ಟರರಿಗೆ ಅಥವಾ ಪ.ಪೂ.ಭಕ್ತರಾಜ ಮಹಾರಾಜರಿಗೆ ಮುಂದಿನಂತೆ ಪ್ರಾರ್ಥನೆ ಮಾಡಬೇಕು, ‘ಇಂದು ನಾನು ಯಾವ ರೀತಿ ಪ್ರಯತ್ನಿಸಬೇಕೆಂಬುದು ನನಗೆ ಗೊತ್ತಿಲ್ಲ. ನೀವೇ ನನಗೆ ಭಜನೆಯ ಮಾಧ್ಯಮದಿಂದ ತೋರಿಸಿರಿ. ಅನಂತರ ಭಾವಪೂರ್ಣವಾಗಿ ಪ್ರಾರ್ಥನೆ ಮಾಡಿ ಪ.ಪೂ.ಭಕ್ತರಾಜ ಮಹಾ ರಾಜರ ಯಾವುದಾದರೂಂದು ಭಜನೆ ಹಾಕಬೇಕು. ನಾವು ಹಾಕಿದ ಭಜನೆಯು ಬುದ್ಧಿಯಿಂದ ನಿರ್ಧರಿಸಿ ಹಾಕಿರದ ಕಾರಣ ಅದರಲ್ಲಿ ಸ್ವೇಚ್ಛೆಯಿರುವುದಿಲ್ಲ.
೩.‘ಇಂದು ನಾನು ಈಶ್ವರನು ಈ ರೀತಿಯಲ್ಲಿ ಸೂಚಿಸಿದ ಭಜನೆಯ ಅರ್ಥದಂತೆ ಸಾಧನೆಗಾಗಿ ಪ್ರಯತ್ನಿಸಬೇಕಾಗಿದೆ’, ಎಂಬ ಶ್ರದ್ಧೆಯನ್ನಿಟ್ಟು ನಮ್ಮ ಸಾಧನೆಯ ದಿನಚರಿಯನ್ನು ಆರಂಭಿಸಬೇಕು.
೪.ಹಾಕಿದ ಭಜನೆಯಲ್ಲಿ ಪ.ಪೂ. ಭಕ್ತರಾಜ ಮಹಾರಾಜರು ಮಾರ್ಗದರ್ಶನ ಮಾಡಿರುವಂತೆ ದೇವರಿಗೆ, ಪ.ಪೂ.ಭಕ್ತ ರಾಜ ಮಹಾರಾಜರಿಗೆ ಅಥವಾ ಪ.ಪೂ. ಡಾಕ್ಟರರಿಗೆ ಪ್ರಾರ್ಥನೆ ಮಾಡಬೇಕು.
೫.ಪ್ರಾರ್ಥನೆಯನ್ನು ಮಾಡುವಾಗ ಪ್ರತಿ ಬಾರಿ ಅದು ಭಾವಪೂರ್ಣವಾಗಿಯೇ ಆಗುತ್ತದೆ ಎಂದೇನಿಲ್ಲ. ಆಗ ಪ.ಪೂ. ಭಕ್ತರಾಜ ಮಹಾರಾಜರ ಭಜನೆಯನ್ನು ಹಾಕಿ ಅದನ್ನು ಶಾಂತವಾಗಿ ಕೇಳಬೇಕು. ಇದರಿಂದ ಮನಸ್ಸು ಮತ್ತು ಬುದ್ಧಿಯ ಮೇಲಿನ ಆವರಣವು ದೂರವಾಗಿ ಅಂತರ್ಮನಸ್ಸಿನಲ್ಲಿ ಭಾವ ನಿರ್ಮಾಣವಾಗಲು ಆರಂಭವಾಗುವುದು. ಸದಾ ‘ಸ್ಥೂಲದಿಂದಲೇ ಪ್ರಾರ್ಥನೆಯಾಗ ಬೇಕೆಂಬ’ ಹಠ ಬೇಡ. ಪ.ಪೂ.ಭಕ್ತರಾಜ ಮಹಾರಾಜರ ಭಜನೆ ಕೇಳಿದಾಗ ಸಾತ್ತ್ವಿಕತೆ ದೊರೆತು ಮನಸ್ಸು ಮತ್ತು ಬುದ್ಧಿಯ ಮೇಲೆ ಬಂದಿರುವ ಕೆಟ್ಟಶಕ್ತಿಯ ಆವರಣವು ದೂರವಾಗಿ ಸಾಧನೆಯಲ್ಲಿ ಆನಂದ ಸಿಗಲು ಸಹಾಯವಾಗುವುದು.
೭.ಮನಸ್ಸು ಆರೋಗ್ಯದಿಂದಿದ್ದರೆ ಸಾಧನೆ ಮಾಡುವಾಗ ಬರುವ ಕೆಟ್ಟ ಶಕ್ತಿಯ ಅಡಚಣೆಗಳ ಪ್ರಮಾಣವು ಕಡಿಮೆಯಾಗಿ ಸಾಧನೆಯಲ್ಲಿ ಸಾತತ್ಯವು ಉಳಿಯಲು  ಸಹಾಯವಾಗುವುದು.
೮.ಆಪತ್ಕಾಲದಲ್ಲಿ ಕೆಟ್ಟ ಶಕ್ತಿಗಳ ಪ್ರಭಾವವು ಹೆಚ್ಚಾಗಿದೆ. ಸಾಧನೆ ಮಾಡುವಾಗ ದೇಹದ ಮೇಲೆ ಕೆಟ್ಟ ಶಕ್ತಿಗಳಿಂದ ಆಕ್ರಮಣ ವಾದರೂ ಈ ಉಪಾಯದಿಂದ ತೊಂದರೆ ದಾಯಕ ಸ್ಪಂದನಗಳ ಪರಿಣಾಮವು ಹೆಚ್ಚು ಕಾಲ ದೇಹದಲ್ಲಿ ಉಳಿಯದಿರುವುದರಿಂದ ನಾವು ಸಹಜವಾಗಿ ತೊಂದರೆಗಳನ್ನು ಎದುರಿಸಬಹುದು.
ಪ್ರಾರ್ಥನೆ!
ಪ.ಪೂ.ಭಕ್ತರಾಜ ಮಹಾರಾಜರ ಭಜನೆಯೆಂದರೆ ಸಾಧನೆಯಲ್ಲಿ ನಮಗೆ ಈಶ್ವರನು ನೀಡಿದ ಆಕಾಶತತ್ತ್ವ ಸ್ತರದ ಅಮೂಲ್ಯ ಚೈತನ್ಯಮಯ ಕೊಡುಗೆಯಾಗಿದೆ. ನಾವು ಆಧ್ಯಾತ್ಮಿಕ ಸ್ತರದಲ್ಲಿ ಅದರ ಲಾಭ ಪಡೆದು ಕೊಳ್ಳೋಣ ಹಾಗೂ ಸಾಧನೆಯಲ್ಲಿ ಸಾತತ್ಯವನ್ನಿಟ್ಟು ಗುರುಕೃಪೆಗೆ ಪಾತ್ರರಾಗೋಣ!
-ಸೌ.ಅಂಜಲಿ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (ಆಷಾಢ ಶುಕ್ಲ ದಶಮಿ, ಕಲಿಯುಗ ವರ್ಷ ೫೧೧೨ (೨೦.೭.೨೦೧೦)

ಸಮಾಜದಿಂದ ಕೇಳಲಾಗುವ ಕೆಲವು ಪ್ರಶ್ನೆಗಳಿಗೆ ಯೋಗ್ಯ ಉತ್ತರಗಳು
ಕೆಲವು ವಾರಗಳ ಹಿಂದೆ ರಾಮನಾಥಿ (ಗೋವಾ) ಆಶ್ರಮಕ್ಕೆ ಸಮಾಜದಿಂದ ದೂರವಾಣಿ ಕರೆ ಬಂದಿತ್ತು.
೧.ಪ್ರಶ್ನೆ: ಮೊದಲಿಗೆ ಓರ್ವ ಮಹಿಳೆಯ ದೂರವಾಣಿ ಕರೆ ಬಂದಿತ್ತು. ಅವಳ ಮಗಳು ಮಾನಸಿಕ ಅಸ್ವಸ್ಥಳಾಗಿದ್ದಾಳೆ. ಕಳೆದ ೪ ತಿಂಗಳಿನಿಂದ ಆಸ್ಪತ್ರೆಯಲ್ಲಿ ಅವಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆ ಮಹಿಳೆಗೆ ಪ್ರವಾಸದಲ್ಲಿ ಭೇಟಿಯಾದ ಸನಾತನದ ಓರ್ವ ಸಾಧಕಿಯು, ‘ಇಂತಹ ಸಮಸ್ಯೆಗಳಿಗೆ ಸಂಸ್ಥೆಯು ಸಹಾಯ ಮಾಡುತ್ತದೆ, ಪರಿಹಾರ ಹೇಳುತ್ತದೆ’ ಎಂದು ಹೇಳಿದಳು. ಆ ಮಹಿಳೆಯು ‘ಇಂತಹ ರೋಗಿಗಳನ್ನು ನಿಮ್ಮಲ್ಲಿ ಉಳಿಸಿಕೊಳ್ಳುವ ಸೌಲಭ್ಯವಿದೆಯೇನು?’ ಎಂದು ಕೇಳಿದಳು.
ಯೋಗ್ಯ ಉತ್ತರ: ಸಾಧಕರು ಇಂತಹ ಸಮಸ್ಯೆಗಳಿಗೆ ಉಪಾಯ ಹೇಳುವುದಾದರೆ ಸಂಬಂಧಿತ ವ್ಯಕ್ತಿಗಳಿಗೆ ಕುಲದೇವತೆಯ ಮತ್ತು ದತ್ತನ ನಾಮಜಪ ಹೇಳಬಹುದು. ‘ಸಂಸ್ಥೆಯು ಇಂತಹ ಸಮಸ್ಯೆಗಳಿಗೆ ಸಹಾಯ ಮಾಡುತ್ತದೆ, ಉಪಾಯ ಹೇಳುತ್ತದೆ’, ಎಂದು ಹೇಳಬಾರದು.
೨.ಪ್ರಶ್ನೆ: ಎರಡನೇ ಪ್ರಶ್ನೆಯು ಸೈನ್ಯದಲ್ಲಿನ ಒಬ್ಬ ವ್ಯಕ್ತಿಯದ್ದಾಗಿತ್ತು. ಸಂಸ್ಥೆಯು ಮುದ್ರಿಸಿದ ಸಮ್ಮೋಹನ ಉಪಚಾರದ ಗ್ರಂಥಗಳನ್ನು ತಾನು ಓದಿದ್ದೇನೆ ಎಂದು ಹೇಳಿ ಅವನು ದೂರವಾಣಿ ಕರೆಯಲ್ಲಿ ಸ್ವಯಂ ಸೂಚನೆ ತಯಾರಿಸಲು ಸಹಾಯ ಕೇಳಿದ್ದನು.
ಯೋಗ್ಯ ಉತ್ತರ: ಇಂತಹ ವ್ಯಕ್ತಿಗಳಿಗೆ ಸಮ್ಮೋಹನ ಉಪಚಾರ ಎಂಬ ವಿಷಯದ ಮುಂದಿನ ಹಂತದ ಗ್ರಂಥಗಳನ್ನು ಓದಲು ಹೇಳಬೇಕು.
ಹೀಗೆ ಹೇಳುವುದರ ಹಿಂದಿನ ದೃಷ್ಟಿಕೋನ: ನಮ್ಮ ಸಂಸ್ಥೆಯ ಕಾರ್ಯವು ‘ಮಿಶನರಿ’ಯಂತೆ ಅಲ್ಲ. ಮಿಶನರಿಗಳು ದುಃಖಿ ಅಥವಾ ಬಡ ವ್ಯಕ್ತಿಗಳು ದೊರಕಿದಾಗ ಅವರನ್ನು ತಮ್ಮ ಕಡೆಗೆ ಎಳೆದುಕೊಳ್ಳುತ್ತಾರೆ. ನಮ್ಮ ಕಾರ್ಯವಿರುವುದು ಈಶ್ವರಪ್ರಾಪ್ತಿ ಮಾಡಿಕೊಳ್ಳುವ ಇಚ್ಛೆಯಿರುವವರಿಗೆ ಮಾತ್ರ.

No comments:

Post a Comment