ಕಾರ್ಯಕರ್ತರಿಗೆ ಸೂಚನೆ

ಸಮಿತಿಯ ಕಾರ್ಯಕರ್ತರು ಧರ್ಮಶಿಕ್ಷಣ ಪ್ರಾರಂಭಿಸುವುದು ಮತ್ತು ಪ್ರತಿಯೊಬ್ಬ ಹಿಂದೂವನ್ನು
ಧರ್ಮಾಚರಣಿಯನ್ನಾಗಿಸುವುದು ತಮ್ಮ ಸಾಧನೆಯಾಗಿದೆ, ಎಂಬುದನ್ನು ತಮ್ಮಲ್ಲಿ ಬಿಂಬಿಸಿಕೊಳ್ಳಬೇಕು!
ಬೆಳಗಾವಿಯಲ್ಲಿ ಸಮಾಜದಿಂದ ಧರ್ಮ ಶಿಕ್ಷಣ ವರ್ಗಕ್ಕಾಗಿ ತುಂಬಾ ಬೇಡಿಕೆಯಿದೆ ಮತ್ತು ಈ ಬೇಡಿಕೆ ದಿನೇದಿನೇ ಹೆಚ್ಚುತ್ತಿದೆ; ಆದರೆ ಧರ್ಮಶಿಕ್ಷಣ ವರ್ಗ ತೆಗೆದುಕೊಳ್ಳುವ ಸಾಧಕರು ತುಂಬಾ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಕೆಲವು ಹಿಂದುತ್ವವಾದಿಗಳು ತಾವಾಗಿಯೇ ‘ಪ್ರತಿಯೊಂದು ಹಳ್ಳಿ, ಬೀದಿಯಲ್ಲಿ ‘ವರ್ಗ ಪ್ರಾರಂಭಿಸಿ’ ಎಂದು ಹೇಳುತ್ತಿದ್ದಾರೆ. ಅವರು ಜನರನ್ನು ಸೇರಿಸಲೂ ಸಿದ್ಧರಿದ್ದಾರೆ; ಆದರೆ ಕಾರ್ಯಕರ್ತರ ಅಧ್ಯಯನ ಕಡಿಮೆಯಾಗುತ್ತಿದೆ.
ಆದುದರಿಂದ ಅವರಿಗೆ ವರ್ಗಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೆಲವು ಕಾರ್ಯಕರ್ತರಲ್ಲಿ ಕ್ಷಮತೆಯಿದ್ದರೂ ಅವರ ಅಧ್ಯಯನ ಮತ್ತು ಯತ್ನಗಳು ಕಡಿಮೆಯಿರುವುದರಿಂದ ವರ್ಗಗಳು ಪರಿಣಾಮಕಾರಿಯಾಗುವುದಿಲ್ಲ. ಅದರಿಂದ ವರ್ಗಗಳಲ್ಲಿನ ಉಪಸ್ಥಿತಿಯ ಮೇಲೆ ಪರಿಣಾಮವಾಗುತ್ತದೆ. ಕಾರ್ಯಕರ್ತರು ವರ್ಗಗಳನ್ನು ತೆಗೆದುಕೊಳ್ಳಲು ಸಿದ್ಧರಾಗುವುದು ಮತ್ತು ಅಧ್ಯಯನವನ್ನು ಹೆಚ್ಚಿಸುವುದು ಅವರ ಸಾಧನೆಯಾಗಿದೆ. ವರ್ಗದಲ್ಲಿ ತೆಗೆದುಕೊಳ್ಳಬೇಕಾದ ವಿಷಯ, ಕ್ರಮವಾರು, ಪ್ರತಿಯೊಂದು ವಿಷಯಕ್ಕೆ ಎಷ್ಟು ಸಮಯ ಕೊಡಬೇಕು, ಎಂಬುದನ್ನು  ಮೊದಲೇ ನಿರ್ಧರಿಸಿ ಅದರಂತೆ ಆಯೋಜನೆ ಮಾಡುವುದು ಆವಶ್ಯಕವಾಗಿದೆ. ಧರ್ಮಶಿಕ್ಷಣ ವರ್ಗದಲ್ಲಿ ಧಾರ್ಮಿಕ ಕೃತಿಯೊಂದಿಗೆ ಹಿಂದೂ ಧರ್ಮದ ಮೇಲಾಗುತ್ತಿರುವ ಆಘಾತ, ಅನ್ಯಾಯ ಇತ್ಯಾದಿ ವಿಷಯಗಳಿಗಾಗಿ ಅಗತ್ಯವಾಗಿ ಸಮಯ ಕೊಡಬೇಕು. ಜಿಲ್ಲಾ ಸೇವಕರು ತಮ್ಮ ಜಿಲ್ಲೆಯಲ್ಲಿ ಧರ್ಮ ಶಿಕ್ಷಣ ತೆಗೆದುಕೊಳ್ಳುವ ಕಾರ್ಯಕರ್ತರ ಹೆಸರನ್ನು ಆರಿಸಿ ಅವರಿಗೆ ವರ್ಗಗಳನ್ನು ತೆಗೆದು ಕೊಳ್ಳಲು ಸಿದ್ಧಪಡಿಸಬೇಕು. ಹಾಗೆಯೇ ಅವರಿಗೆ ಯಾವ ಗ್ರಂಥಗಳನ್ನು ಅಧ್ಯಯನಕ್ಕಾಗಿ ಕೊಡಬೇಕು ಎಂಬುದನ್ನು ನಿರ್ಧರಿಸಬೇಕು. ಧರ್ಮ ಶಿಕ್ಷಣ ವರ್ಗಗಳನ್ನು ನಡೆಸುವವರ ಸಂಖ್ಯೆ ಕಡಿಮೆಯಿದ್ದರೆ ಒಂದು ವಾರದಲ್ಲಿ ಧರ್ಮ ಸತ್ಸಂಗದ ಧ್ವನಿಚಿತ್ರಮುದ್ರಿಕೆಯನ್ನು ತೋರಿಸಬಹುದು ಮತ್ತು ಇನ್ನೊಂದು ವಾರ ಧರ್ಮ ಸತ್ಸಂಗವನ್ನು ತೆಗೆದುಕೊಳ್ಳಬಹುದು. ಕಾರ್ಯ ಕರ್ತರು ಧರ್ಮಶಿಕ್ಷಣವರ್ಗ ನಡೆಸುವುದು ಮತ್ತು ಪ್ರತಿಯೊಬ್ಬರನ್ನು ಧರ್ಮಾಚರಣಿ ಯನ್ನಾಗಿಸುವುದು ನಮ್ಮ ಸಾಧನೆ ಯಾಗಿದೆ, ಎಂಬುದನ್ನು ತಮ್ಮಲ್ಲಿ ಬಿಂಬಿಸಿಕೊಳ್ಳಬೇಕು. - ಶ್ರೀ.ಶಂಕರ ನರೂಟೆ, ಬೆಳಗಾವಿ.

No comments:

Post a Comment